reflita... isso é muito bom para o nosso dia a dia!!!
ವರ್ಷಧಾರ
ಬೆತ್ತಲಗಿದ್ದ ಭೂಮಿ ನಾಚಿ ನೀರ್ ಕೇಳಿರಲು,ಮೋಡಗಳು ನರ್ತಿಸುತ್ತ, ತಮ್ಮ ಅಂಗಗಳ ನೇವರಿಸಿ,ಮುದುಡಿದ ಮೊಗದ ಮೇಲೆ ಮುತ್ತಿನ ರಾಶಿಯ ಸುರಿಸಿದ ಹಾಗೆ, ಅವಳ ಅಡಿಅಡಿಯನ್ನು ಪನ್ನೀರಿನಿಂದ ನೆನೆಸಿತು.ಉಬ್ಬಿದ ಕುಚಕ್ಕೆ ಬಿಳಿ ರವಿಕೆ ನೇಯಿಸಿ ಹೊಲಿಸಿ ತೊಡಿಸಿ,ನಾಭಿಯನ್ನು ಹಾಲಿನಿಂದ ತುಂಬಿತು ಹನಿಗಳನ್ನು ಜೊತೆಗೂಡಿಸಿ,ತಾ ಸವರಿದಲ್ಲೆಲ್ಲ ಮಣ್ಣನ್ನು ಚಿನ್ನೈಸಿ,ನಲಿಯಿತು ಬೆತ್ತಲೆ ಮೈಗೆ ಹಸಿರು ಸೀರೆ ಉಡಿಸಿ.ಇಂತಿಪ್ಪ ಮನ್ವಂತರಿಸಿ, ಆಲಿಸಿ ಅವಳ ಮೊರೆ,ಚೊಚ್ಚಲ ಋತುಮತಿ ಯನ್ನಾಗಿಸಿತು ರತಿಯ ಗೆಳತಿಯ, ಗರ್ಭಪಾತವಾದಲ್ಲೆಲ್ಲ ಬಿತ್ತಿ ನವ ಪಿಂಡ,ಹೊಸ ಚಿಗುರಿನಿಂದ ಅಂಗಗಳನ್ನೆಲ್ಲ ಅಲಂಕರಿಸಿತು ಕಂಡ.ವನವನವ ಉಬ್ಬಿಸಿದ, ಅವಳ ಬಾಯಾಡಿಕೆ ನೀಗಿಸಿದ, ನಿನ್ನ ಸ್ಪರ್ಶ ಮಾನ್ಯ,ನಗ್ನ ಸುಂದರಿಗೆ ಉಡುಗೆ ತೊಡಿಸಿದ ವರ್ಷಋತು, ನೀನೆ ಧನ್ಯ!!!!!!- ರಮೇ
Nenhum comentário:
Postar um comentário